ನ್ಯಾನ್ - ನಿಂಗ್ -
	ಚೀನ ಜನತಾ ಗಣರಾಜ್ಯದ ಆಗ್ನೇಯ ಭಾಗದಲ್ಲಿರುವ ಗ್ವಂಗ್‍ಸೀ ಚವಾಂಗ್‍ಸ್ವಯಮಾಡಳಿತ ಪ್ರದೇಶದ ಆಡಳಿತ ಕೇಂದ್ರ. ಕ್ಯಾಂಟನ್ ನಗರದ ಪಶ್ಚಿಮಕ್ಕೆ 528 ಕಿಮೀ. ದೂರದಲ್ಲಿದೆ. ಇದರ ಸುತ್ತಣ ಪ್ರದೇಶಗಳಲ್ಲಿ ಹತ್ತಿ, ಕಬ್ಬು, ಹಣ್ಣು ಬೆಳೆಯುತ್ತದೆ. 1913ರಿಂದ 1947ರ ವರೆಗೆ ಇದಕ್ಕೆ ಯುಂಗ್-ನಿಂಣ್ ಎಂಬ ಹೆಸರಿತ್ತು. 1954ರಲ್ಲಿ ಕೊನೆಗೊಂಡ ಇಂಡೋಚೀನ ಯುದ್ಧದಲ್ಲಿ ಫ್ರೆಂಚರ ವಿರುದ್ಧ ನಡೆದ ದಾಳಿಗಳಲ್ಲಿ ಇದು ಕಮ್ಯುನಿಸ್ವರಿಗೆ ಸರಕು ಸರಬಾರಜಿನ ಪ್ರಮುಖ ಕೇಂದ್ರವಾಗಿತ್ತು. ಹತ್ತಿ ಮತ್ತು ಸಾಂಬಾರ ದಿನಸಿಗಳಿಗೆ ಇದು ಪ್ರಖ್ಯಾತ ವ್ಯಾಪಾರ ಕೇಂದ್ರ. ಜನಸಂಖ್ಯೆ 3,75,000 (1970 ಅಂ.)
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ